Friday, October 18, 2013

ಕೊಟ್ಟು ಉಳಿಸಿ, ಕಲಿತು ಬೆಳೆಸಿ

ಇನ್ನಾದರೂ ನಾವು ಸಂಸ್ಕೃತದ ಮಹತ್ವ ಅರಿಯಬೇಕು, ಪುರೋಹಿತರ ಭಾಷೆ ಎಂದು ಜರಿಯುವುದನ್ನು ಬಿಡಬೇಕು. ಸಂಸ್ಕೃತ ಬ್ರಾಹ್ಮಣರ ಬಳಿ ಬೆಳೆದದ್ದು ಸಾಕು, ದಲಿತ, ಪರಿಶಿಷ್ಟರ ಬಾಯಲ್ಲೂ ನಲಿಯಲಿ, ಎಲ್ಲರ ಭಾಷೆಯಾಗಿ ಉಳಿಯಲಿ. ಪ್ರಜಾಪ್ರಭುತ್ವದಲ್ಲಿ  ಭಾಷೆ, ಆಶಯ,ಆಚರಣೆಗಳಿಗೆ ಮಹತ್ವ ಸಿಗುವುದು ಸಂಖ್ಯೆಯಿಂದ ಮಾತ್ರ. ಸಂಸ್ಕೃತವನ್ನಾಗಲಿ, ವೇದೋಪನಿಷತ್ತುಗಳನ್ನಾಗಲಿ ಮಡಿವಂತಿಕೆಯಿಂದ ಉಳಿಸಲು ಸಾಧ್ಯವಿಲ್ಲ. ಕೊಟ್ಟು ಉಳಿಸಬೇಕು. ಕಲಿತು ಬೆಳೆಸಬೇಕು. ಅದು ಇಂದಿನ ಅಗತ್ಯ.

No comments:

Post a Comment